ಖರ್ಚು ಇನ್ನು ಮುಂದೆ ನೋಯಿಸುವುದಿಲ್ಲ : ಜಾರ್ ನಿಮಗೆ ನಿಮ್ಮ ಪ್ರತೀ ಖರ್ಚಿನಲ್ಲೂ ಹೂಡಿಕೆ ಮಾಡಲು ಸಹಾಯ ಮಾಡುತ್ತದೆ!

Author Team Jar
Date Apr 21, 2023
Read Time Calculating...
ಖರ್ಚು ಇನ್ನು ಮುಂದೆ ನೋಯಿಸುವುದಿಲ್ಲ : ಜಾರ್ ನಿಮಗೆ ನಿಮ್ಮ ಪ್ರತೀ ಖರ್ಚಿನಲ್ಲೂ ಹೂಡಿಕೆ ಮಾಡಲು ಸಹಾಯ ಮಾಡುತ್ತದೆ!

ಈಗ ಹೂಡಿಕೆ ಮಾಡಲು ನೀವು ನಿಮ್ಮ ಜೇಬನ್ನು ಖಾಲಿ ಮಾಡಬೇಕಾಗಿಲ್ಲ. ಡಿಜಿಟಲ್ ಗೋಲ್ಡ್ ನಲ್ಲಿ ನಿಮಗೆ ಹೂಡಿಕೆ ಮಾಡಲು ಮತ್ತು ನಿಮ್ಮ ಹಣವನ್ನು ಹೆಚ್ಚಿಸಲು ಜಾರ್ ಆಪ್ ಸಹಾಯ ಮಾಡುತ್ತದೆ.

ಈಗ ಎಲ್ಲರೂ ಹಣವನ್ನು ಉಳಿಸಬಹುದು

ಹಣ ಉಳಿಸಲು ತೊಂದರೆ ಪಡೆಯುತ್ತಿದ್ದೀರಾ? ನಾವೆಲ್ಲರೂ ತೊಂದರೆ ಪಟ್ಟಿದ್ದೇವೆ!

ನೀವು ಸ್ವಲ್ಪಮಟ್ಟಿಗಾದರೂ ನಮ್ಮಂತೆ ಇದ್ದರೆ, ನಿಮ್ಮ ಎಲ್ಲಾ ಹಣವನ್ನು ಆನ್ಲೈನ್ ನಲ್ಲಿ ಖರ್ಚು ಮಾಡುವ ಬಲೆಗೆ ಬಿದ್ದಿರುತ್ತೀರಿ ಹಾಗೆಯೇ ಅದು ಎಷ್ಟೋ ಬಾರಿ ತೊಂದರೆಗೆ ಸಿಲುಕಿಸಿದೆ ಎಂಬುದು ನಮಗೆ ತಿಳಿದಿದೆ.

ನಮ್ಮೆಲ್ಲರಿಗೂ ಹೆಚ್ಚು ಹೆಚ್ಚು ಹಣ ಉಳಿಸುವ ಬಯಕೆ ಇರುತ್ತದೆ, ಆದರೆ ಒಂದು ದೃಢ ಯೋಜನೆ ಹಾಗೂ ಒಳ್ಳೆಯ ಆರ್ಥಿಕ ಅಭ್ಯಾಸಗಳಿಲ್ಲದಿದ್ದರೆ, ಅತ್ಯುತ್ತಮರು ಸಹ ವಿಫಲವಾಗುವರು.

ನಿಮಗೆ ಅರಿವಾಗುವ ಮೊದಲೇ, ತಿಂಗಳು ಕೊನೆಯಾಗಿರುತ್ತದೆ. ಒಹೋ, ನೀವು ಯೋಚಿಸಿದ್ದ ಉಳಿತಾಯದ ಹತ್ತಿರವೂ ನೀವು ತಲುಪಿರುವುದಿಲ್ಲ. 

ನೀವು ಅಂಕಿಅಂಶಗಳನ್ನು ನೋಡುವುದಾದರೆ ಅದು ಇನ್ನಷ್ಟು ವಿಚಿತ್ರವಾಗಿದೆ ಏಕೆಂದರೆ , ಒಬ್ಬ ಭಾರತೀಯ ವ್ಯಕ್ತಿ ಸಂಪಾದನೆ ಆರಂಭಿಸುವ ಸರಾಸರಿ ವಯಸ್ಸು 21 ಆಗಿದ್ದರೂ ಹೂಡಿಕೆಯ ವಯಸ್ಸು 30 ಆಗಿದೆ. ಇಲ್ಲಿ ಬರಾಬರಿ 10 ವರ್ಷಗಳ ಅಂತರವಿದೆ!

ಸ್ವಯಂಚಾಲಿತ ಪ್ರತಿದಿನ ಉಳಿತಾಯಗಳು ಜಾರ್ ಆಪ್ ನೊಂದಿಗೆ

ಈ ಗುಂಪಿನ ಪ್ರವೃತ್ತಿಗಿಂತ ಭಿನ್ನವಾಗಲು, ಉಳಿತಾಯದಲ್ಲಿರುವ ಈ ಅಂತರವನ್ನು ಕಡಿಮೆ ಮಾಡಿ ಉತ್ತಮ ರೀತಿಯಲ್ಲಿ ಹಣವನು ಉಳಿಸಲು, ನಮ್ಮ ಬಳಿ ನಿಮಗಾಗಿ ಒಂದು ಸೂಕ್ತವಾದ ಆಪ್ ಇದೆ ಎಂದು ನಾವು ಹೇಳಿದರೆ?

ನಿಮ್ಮ ಹಣವನ್ನು ಮೋಜಿನ ಹಾಗೂ ಸರಳ ವಿಧಾನದೊಂದಿಗೆ ಉಳಿತಾಯ ಮಾಡಲು ಜಾರ್ ಎಂಬ ಈ ಅದ್ಭುತ ಆಪ್ ಅನ್ನು ಬಳಸಿ! ಕುತೂಹಲವೇ?

ನೀವು ಕೇವಲ ಖರ್ಚು ಮಾಡಬೇಕಾಗಿದೆ. ನಾವು ತಮಾಷೆ ಮಾಡುತ್ತಿಲ್ಲ! ಜಾರ್, ನಿಮ್ಮ ಪ್ರತೀ ಖರ್ಚನ್ನು SMS ಮೂಲಕ ಪತ್ತೆ ಹಚ್ಚಿ ಅದನ್ನು ಹತ್ತಿರದ 10 ಕ್ಕೆ ರೌಂಡ್ ಆಫ್ ಮಾಡುತ್ತದೆ.

ಸರಿ ಈಗ ನೀವು Myntraದಿಂದ ಅಷ್ಟೇನು ಆಕರ್ಷಕವಲ್ಲದ ಟಾಪ್ ಅನ್ನು ರೂ 495 ಗೆ ಖರೀದಿಸಿದ್ದರೆ, ಜಾರ್ ಅದನ್ನು 500 ಕ್ಕೆ ರೌಂಡ್ ಆಫ್ ಮಾಡುತ್ತದೆ ಹಾಗೂ ನಿಮ್ಮ ಪರವಾಗಿ ವ್ಯತ್ಯಾಸದ ಮೊತ್ತ(500 - 495) ವನ್ನು ಹೂಡಿಕೆ ಮಾಡುತ್ತದೆ! ಜಾಣತನವಲ್ಲವೇ?

ನಿಮಗೆ ಉಳಿತಾಯವನ್ನು ಒಂದು ಹೊರೆ ಎಂದುಕೊಳ್ಳುವ ಬದಲು ಅದನ್ನು ನಿಮಗೆ ಅಭ್ಯಾಸ ಮಾಡಿಸುವುದು ಎಂದರೆ ಇದು ಅದ್ಭುತವಲ್ಲವೇ?

ಬಾಲ್ಯದಲ್ಲಿ ನಮ್ಮ ಪಿಗ್ಗಿ ಬ್ಯಾಂಕ್ ಅಥವಾ ಹುಂಡಿಯಲ್ಲಿ ನಾವು ಬಿಡಿ ಕಾಸನ್ನು ಕೂಡಿಟ್ಟುಕೊಂಡು, ಅದು ತುಂಬಿದ ಮೇಲೆ ನಮ್ಮ ನೆಚ್ಚಿನ ಆಟಿಕೆ ಅಥವಾ ಬಟ್ಟೆ ಕೊಳ್ಳಲು ಅತೀ ಉತ್ಸಾಹದಿಂದ ಕಾಯುತ್ತಿದ್ದೆವು.

ಈಗ ಇದು ಒಂದು ಸಂಘಟಿತ, ಸ್ವಯಂಚಾಲಿತ ವೇದಿಕೆಯ ರೂಪವನ್ನು ಪಡೆದಿದೆ, ಅದೇ ಜಾರ್.

ಆದರೆ ನಿಲ್ಲಿ, ಆ ಎಲ್ಲಾ ಹಣ ಎಲ್ಲಿ ಹೋಗುತ್ತದೆ? ನೀವು ನಿಮ್ಮ ವ್ಯತ್ಯಾಸದ ಹಣವನ್ನು  99.9% ಶುದ್ಧ ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡಿದ್ದೀರಿ ಅಷ್ಟೇ; ಸುರಕ್ಷಿತವಾಗಿ, ವಿಶ್ವ ದರ್ಜೆಯ ಭದ್ರಕೋಣೆಯಲ್ಲಿ ಉತ್ತಮ ಭಾರತೀಯ ಬ್ಯಾಂಕ್ ಗಳಿಂದ ಇನ್ಶೂರ್ ಮಾಡಿ!

ಹೌದು, ಈ ಆಪ್ ನಿಮ್ಮ ಬ್ಯಾಂಕ್ ಖಾತೆಯಿಂದ ಉಳಿದ ರೂ 5 ಅನ್ನು UPI ಆಟೋಪೇ ಮೂಲಕ ಸ್ವಯಂಚಾಲಿತವಾಗಿಯೇ ಕಳೆಯುತ್ತದೆ. ರೋಚಕ, ಅಲ್ಲವೇ? ಸರಿ, ನಿಮ್ಮ ಮನವೊಪ್ಪಿಸಲು ಇದು ಸಾಲದೆಂದರೆ, ಇನ್ನೂ ಇದೆ!

ಜಾರ್ ಆಪ್ ನೀಡುತ್ತಿರುವ ಈ ಅದ್ಭುತ ವೈಶಿಷ್ಟ್ಯಗಳನ್ನು ನೋಡಿ:

  • ₹1 ರಷ್ಟು ಕಡಿಮೆ ಬೆಲೆಯ ಹೂಡಿಕೆಯನ್ನು ಮಾಡಿ : ಇದನ್ನು ನಂಬಿ ಅಥವಾ ಬಿಡಿ, ನೀವು ಜಾರ್ ಆಪ್ ಮೂಲಕ, ಡಿಜಿಟಲ್ ಗೋಲ್ಡ್ ನಲ್ಲಿ, ₹1 ರಷ್ಟು ಕಡಿಮೆ ಬೆಲಯ ಹೂಡಿಕೆಯನ್ನೂ ಮಾಡಬಹುದು.

  • ಕ್ಷಣಗಳಲ್ಲಿ ಸೈನ್ ಅಪ್ ಮಾಡಿ : ನಿಮ್ಮ Android ಫೋನ್ ನಲ್ಲಿರುವ Jar ಆಪ್ ನಲ್ಲಿ ಕೇವಲ 30 ರಿಂದ 45 ಸೆಕೆಂಡುಗಳಲ್ಲಿ ಖಾತೆ ತೆರೆದು ತಕ್ಷಣವೇ ಹೂಡಿಕೆ ಆರಂಭಿಸಿ! KYC ಅಥವಾ ಬ್ಯಾಂಕ್ ಖಾತೆಗೆ ಲಿಂಕ್ ಆಗುವ ಗೊಂದಲವಿಲ್ಲ. ಇದಕ್ಕಿಂತ ಸರಳ ಏನಾದರೂ ಉಂಟೇ?

  • ಯಾವುದೇ ಬದ್ಧತೆ ಇಲ್ಲ : ಜಾರ್ ಉಪಯೋಗಿಸುವಾಗ ನಿಮ್ಮ ಹಣದ ನಿಯಂತ್ರಣ ನಿಮ್ಮ ಕೈಯಲ್ಲೇ ಇರುತ್ತದೆ. ನೀವು ಯಾವಾಗ ಬೇಕಾದರೂ ನಿಮ್ಮ ಹೂಡಿಕೆಗಳಿಗೆ ವಿರಾಮ ನೀಡಬಹುದು ಅಥವಾ ಅದನ್ನು ನಿಲ್ಲಿಸಬಹುದು. ಪ್ರತೀ ತಿಂಗಳು ನಿಮ್ಮ ಖಾತೆಯಿಂದ ದೊಡ್ಡ ಮೊತ್ತದ ಹಣ ಕಡಿತಗೊಳ್ಳುವ ಬಗ್ಗೆ ಚಿಂತೆ ಬೇಡ.

  • ನಿಮ್ಮ ಉಳಿತಾಯದ ರೀತಿಯನ್ನು ಆಯ್ಕೆ ಮಾಡಿ : ಜಾರ್ ನಿಮಗೆ ಹಣ ಉಳಿತಾಯ ಮಾಡುವ ಎರಡು ರೀತಿಯ ಆಯ್ಕೆಯನ್ನು ನೀಡುತ್ತದೆ. ನೀವು, ಕಡಿತಗೊಳ್ಳಬೇಕಾದ ನಿಮ್ಮ ಪ್ರತಿದಿನದ ಉಳಿತಾಯದ ಮೊತ್ತವನ್ನು, ಆಯ್ಕೆ ಮಾಡಬಹುದು ಅಥವಾ ರೌಂಡಿಂಗ್ ಅಪ್ ಅನ್ನು ಆಯ್ಕೆ ಮಾಡಬಹುದು, ಇದರಲ್ಲಿ ನಿಮ್ಮ ಪ್ರತಿ ಖರ್ಚಿನಿಂದಲೂ ವ್ಯತ್ಯಾಸದ ಮೊತ್ತವನ್ನು ಸ್ವಯಂಚಾಲಿತವಾಗಿಯೇ ಕಡಿತಗೊಳಿಸಲಾಗುತ್ತದೆ.

  • ಹಿಂದಿನ ಉಳಿತಾಯವನ್ನು ದ್ವಿಗುಣಗೊಳಿಸಿ : ಪ್ರತೀ ಕಡಿತಕ್ಕೆ, ಒಂದು ಆಟವನ್ನು(ಅದನ್ನು ನಾವು ಜಾರ್ ಸ್ಪಿನ್ ಎಂದು ಹೇಳುತ್ತೇವೆ) ಸಕ್ರೀಯಗೊಳಿಸಲಾಗುತ್ತದೆ ಹಾಗೂ ನೀವು ಅದರಲ್ಲಿ ಗೆದ್ದರೆ, ನಿಮಗೆ ನಿಮ್ಮ ಹಿಂದಿನ ಉಳಿತಾಯವನ್ನು ಹೆಚ್ಚಿಸುವ ಅವಕಾಶ ದೊರೆಯುತ್ತದೆ! ಉಳಿತಾಯ ಯಾವತ್ತೂ ಇಷ್ಟು ಮೋಜು ನೀಡುತ್ತಿದ್ದರೆ ಎಷ್ಟು ಒಳ್ಳೆಯದು ಅಲ್ಲವೇ, ಒಹ್!

  • ಬೇಕಾದಾಗ ಹೊರಬರಬಹುದು : ನೀವು ನಿಮ್ಮ ಚಿನ್ನವನ್ನು ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಮಾರಾಟ ಮಾಡಬಹುದು, ಹಾಗೂ ನಿಮ್ಮ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆ. 

ಉಳಿತಾಯ(ಹಾಗೂ ಖರ್ಚು!) ಯಾವತ್ತೂ ಇಷ್ಟು ಮೋಜು ನೀಡಲಿಲ್ಲ, ಅಲ್ಲವೇ! ಇನ್ನೂ ತಡವೇಕೆ? ಇಂದೇ Jar app ಡೌನ್ಲೋಡ್ ಮಾಡಿ ಹಾಗೂ ಸುಗಮವಾಗಿ ಹೂಡಿಕೆ ಆರಂಭಿಸಿ.

ಡಿಜಿಟಲ್ ಗೋಲ್ಡ್ ಇನ್ವೆಸ್ಟ್ಮೆಂಟ್ಸ್ ಬಗ್ಗೆ ಹೆಚ್ಚು ತಿಳಿಯಲು ಡಿಜಿಟಲ್ ಗೋಲ್ಡ್ ನ FAQ ಪುಟ ಹಾಗೂ ಹೆಚ್ಚಿನ ಪ್ರಶ್ನೆಗಳನ್ನು ನೋಡಿ.

Team Jar

Author

Team Jar

ChangeJar is a platform that helps you buy gold.

download-nudge

Buy Digital Gold

Join 4 Cr+ Indians on Jar, India's Most Trusted Gold Buying App.

Download App Now

emperor666

emperor666